
ಜೇಡ ಹೊಸೆಯಿತು ,Jeda hoseyitu,
ಸೊಗಸಾದ ಬಲೆಯ,Sogasada Baleya,
ಸಿಕ್ಕಿಬಿದ್ದವು ಕೀಟಗಳು , Sikkibaddavu keetagalu,
ಬಲೆಯ ಕಲೆಗೆ, Baleya Kalege,
ದೇವರು ಹೊಸೆದ Devaru Hoseda
ಸಂಸಾರದ ಬಲೆಯು , Sansara baleyu,
ಜೇಡದ ಬಲೆಯು Jedara Baleya
ಮೀರಿದಾ ಕಲೆಯು , meeridaa Kaleyu,
ಬಲೆಯಲ್ಲಿ ಬಿದ್ದು , baleyalli biddu,
ಹೊರಳಾಡುವ ನಾವು , Horaladuva naavu,
ದೇವರ ನೆನೆನೆನೆದು Devara nenenenedu
ಕೊರಗುವೆವು ಎಂದು , Koraguvevu endu,
ಬಲೆಗೆ ಬಿದ್ದ , balege bidda,
ಕೀಟಗಳ ತಿಂದು , keetagala tindu,
ಸಂಭ್ರಮಿಸುವುದು ಈ Sambhramisuvudu ee
ಜೇಡವು ಇಂದು , jedavu indu,
ತಾನೆ ರಚಿಸಿದ , Taane rachisida,
ಬಲೆಯಲಿ ಬಿದ್ದು , Baleyali biddu,
ನರಳುತ ಸಾಯುವುದು naraluta saayuvudu
ಜೇಡವು ನೊಂದು, jedavu nondu,
ದೇವರ ಬಲೆಯ Devara baleya
ವೋಳಗಡೆ ನಾವು , Volagade naavu,
ನಮ್ಮದೇ ಬಲೆಯ nammade baleya
ವಿರಚಿಸಿ ನಾವು , virachisi naavu,
ಬಲೆಯಲ್ಲಿ ಬಿದ್ದು baleyalli biddu
ಹೊರಲಾಡುತ ಲಿದ್ದು , Horalaaduta liddu,
ಬಲೆಯ ಹೊರಗೆ baleya horage
ಬರಲಾರದೆ ನೊಂದು , baralarade nondu,
ಹೊರ ಬರಲಾರದ hora baralarada
ಭಾಗ್ಯವ ನೆನೆದು bhagyava nenedu
ಅಮೃತವಿದೆ ಎಂದು , Amrutavide endu,
ಸಮರ್ಥಿಸುವೆವು ಎಂದು samarthisuvevu endu .
-mAgA


