Search This Blog

Friday, February 24, 2012

ಗೆಲುವು ಎಲ್ಲಿಹುದು




ಸೋಲುವುದು  ಸಹಜ  
ಈ  ಸೋಲ  ಮೆಟ್ಟಿ  
ಎದ್ದು  ನಿಲ್ಲೋದು  
ಮರಳ  ಮೇಲೆ  ಮನೆ  ಕಟ್ಟೋದು 

ಸೋಲೇ  ಗೆಲುವಿನ  ಮೆಟ್ಟಿಲು, 
ಆ  ಮೆಟ್ಟಿಲ  ಸುಳಿವು  ಎಲ್ಲಿಹುದು,
ಪ್ರತಿ  ಮೆಟ್ಟಿಲ  ಮೆಟ್ಟಿದಾಗಲು 
ಅದರ  ಹೇಸರೇ  ಇರುವುದು  ಸೋಲು .

ಗೆಲುವಿನ  ಮೆಟ್ಟಿಲು  
ಕೊನೆಯಿಲ್ಲುಹುದೇ ?!, 
ಆ  ಕೊನೆ  ಮೆಟ್ಟಿಲು  
ಆಕಾಶದಿ  ಅಡಗಿಹುದೇ  

ಈ  ಆಕಾಶಕ್ಕೆ  ಹಾಕಿದ  ಏಣಿ 
ಏರುತ್ತಿಹೆವು   ಒಂದೊಂದಾಗಿ  
ಮೆಟ್ಟಿಲ  ಚಕ್ರವ್ಯುಹವು  ಇದು 
ಎಳೆದೊಯ್ಯುತಿಹವು  ಎಂದು  

ಈ ಏಣಿಯಾ ಕೊನೆ ಎಲ್ಲಿಹುದು 
ನಾ ಹುಡುಕುತಿಹ ಗೆಲುವಿನಲ್ಲಿಹುದೆ?
ಎಣಿಯನು ನಂಬಲೇ?
 ಬೇರೆ ಎಣಿಯನು ಹುಡುಕಲೇ?

ಮುಗಿಯದ ಈ ಪಯಣ 
ಬೆನ್ನತ್ತಿಹೆ ತ್ರಿವಿಕ್ರಮನಂತೆ 
ಗೆಲುವಿರದಿದ್ದರೆ ಏನಂತೆ 
ಸ್ವಾರಸ್ಯವಿಹುದು ಪಯಣ ಪಾದರಸದಂತೆ 

Monday, January 9, 2012

ಲೋಕಿ



ಭಲೇ ಲೋಕಿ 

ಭಲೇ  ಭಲೇ  ಮೆಚ್ಚಿದೆ
ಲೋಕಿ  ನಿನ್ನ  ಕೆಚ್ಚೆದೆಯ  ಕರೆಯನ್ನ  ಕೇಳಿ

ಚಚ್ಚಿ  ಚಚ್ಚಿ  ಹಾಕ  ಹೊರಟ  
ನಿನ್ನ  ರಣ ವೀಳ್ಯವ  ಕೇಳಿ


ಬಿತ್ತರಿಸುವೆನು  ಇತ್ತ  ಅತ್ತ , ಸುತ್ತ  ಮುತ್ತ
ನಿನ್ನ  ರಣ  ಕಹಳೆಯ,

ಕೊನೆಯ  ಕಟ್ಟ  ಕಡೆಯ  ದುಷ್ಟನ
ರಕ್ತ  ದೋಕುಳಿಯಾಡುವ  ಶಕ್ತಿ  ನಿಮಗಿರಲಿ  

ಮುಕ್ತ  ಮಾಡಿಸು  ಜಗವ
ಈ  ಕೀಚಕರ  ಭಂಡಾಟದಿಂದ

 ಶುಬ್ರವಾಗಿಸು  ಭಾರತಾಂಬೆಯ  ಮಡಿಲ
ಈ ಕಾರ್ಕೋಟಕ  ವಿಷ  ವರ್ತುಲದಿಂದ

mAga