Search This Blog

Friday, November 20, 2015

ಬೈ ಬೈ ಬೆಂಗಳೂರು

ನೀ ನನಗೆ ಬೈ ಬೈ ಬೈ
ನಾ ನಿನಗೆ ಬೆ ಬೆ ಬೈ ಬೈ ಬೈ

ಹೀಗೆ ಕೆಲಕಾಲ ನಮ್ಮಿಬ್ಬರಲು ಬೈ ಬೈ ಬೈ
ಸಮಾಜಿಕ ತಾಣಗಳ ಸ್ನೇಹಿತರ ನಡುವೆ ಬೈ ಬೈ ಬೈ

ಹೀಗೊಂದು ಒಪ್ಪಂದ ಮಾಡಿಕೊಂಡರೆ ಜಗಕ್ಕೆಲ್ಲ
ನಾವಿಬ್ಬರೇ ಸೈ ಸೈ ಸೈ

ನೀ ನನ್ನ ಕೃತಿಗೆ ಬೈ
ನಾ ನಿನ್ನ ಕೃತಿಗೆ ಬೈ ಬೈ ಬೈ

ಹೀಗೆ ಆಗಲಿ ನಮ್ಮೀರ್ವರ ಪತ್ರಿಕಾ ಸ್ಮೃತಿ
ನಡೆಯಲಿ ಎಲ್ಲಡೆ ನಮ್ಮೀರ್ವರ ಸ್ಮೃತಿ

ನಮ್ಮೀರ್ವರ ಒಗ್ಗಟ್ಟು ಯಾರಿಗೂ ತಿಳಿಯದಿರಲಿ
ಈ ಒಗ್ಗಟ್ಟಿಗೆ ಹುಚ್ಚ ಯಂಕಣ್ಣನ ಆಶೀರ್ವಾದವಿರಲಿ
- ನನ್ಮಗಂದ್

ಗಾಂಪ ಗಂಗಾಧರ

Saturday, June 13, 2015

ಜಾದೂ ಕಿ ಚಪ್ಪಿ

ಹ್ಯಾಂಗಾನ ಅಪ್ಪಿ ಕೊಳ್ಳಲೋ
ಈ ಮಾಣಿನ ಆನು
ಹ್ಯಾಂಗಾನ ಒಪ್ಪಿ ಕೊಳ್ಳಲೋ

ದಿನ ಕರ್ಕೊಂಡು ಹೋಗಿ ಸಿನಿಮಾ ತೋರಿಸ್ತಾ
ಜಾದು ಕಿ ಚಪ್ಪಿ ಹೇಳಿ ಆಪಕೋಳಲೇ ಬರ್ತಾ
ಸಂಜಯ ಬಾಬ ಫ್ಯಾನು ಹೇಳ್ತಾ ತಿರಗ್ತಾ

ಹ್ಯಾಂಗಾನ ಅಪ್ಪಿ ಕೊಳ್ಳಲೋ
ಈ ಮಾಣಿನ ಆನು
ಹ್ಯಾಂಗಾನ ಒಪ್ಪಿ ಕೊಳ್ಳಲೋ

ಕನ್ನಡ ಪಿಲ್ಮ್ ತೋರಿಸ್ತ್ನಿಲ್ಲೇ (ತೋರಿಸತನೆ ಇಲ್ಲೇ)
ಹಿಂದಿ ಪಿಲ್ಮ ಅಲ್ಲೇ ಇರ್ತ
ಬಾಯಿ ತೆಗೆದ್ರೆ ಚಪ್ಪಿ ಅಂತಾ

ಹ್ಯಾಂಗಾನ ಅಪ್ಪಿ ಕೊಳ್ಳಲೋ
ಈ ಮಾಣಿನ ಆನು
ಹ್ಯಾಂಗಾನ ಒಪ್ಪಿ ಕೊಳ್ಳಲೋ

ಸಂಜಯ ಸಲ್ಮಾನ ಅಂತಾ ಇರ್ತ
ಜೈಲು ಹಕ್ಕಿ (ಅವು,) ಅಂದ್ರೆ ಸುಳ್ಳೇ ಅಂತ
ಪಾಂಚವೀ ಪಾಸು ಹೇಳ್ಕಂಡ ಬರ್ತಾ

ಹ್ಯಾಂಗಾನ ಅಪ್ಪಿ ಕೊಳ್ಳಲೋ
ಈ ಮಾಣಿನ ಆನು
ಹ್ಯಾಂಗಾನ ಒಪ್ಪಿ ಕೊಳ್ಳಲೋ

Saturday, March 21, 2015

ಯುಗಾದಿ - ಮನ್ಮಥ ನಾಮ

ಪ್ರಕೃತಿಯ ಸಹಜ ಹೊಸ ನಡಿಗೆ
ಎಂದೆಂದಿಗೂ ಮರೆಯದ ನಡಿಗೆ
ಛಳಿಯನ್ನು ಕಳಿಸಿ ಮನೆಗೆ
ನವಕಳೆ ಕರುಣಿಸಿ ಧರೆಗೆ
ಸವೀ ಎರೆದಿದೆ ಎಮಗೆ

ಪ್ರಕೃತಿಯ ಬೇವು ತಿನ್ನುತ್ತಾ
ಸಂಸ್ಕೃತಿಯ ಬೆಲ್ಲ ಸವಿಯುತ್ತಾ
ಸಹಜ ನೋವುಗಳ ಮೀರುತ್ತಾ
ಸಭ್ಯ ಸುಸಂಸ್ಕೃತ ಸಂಸ್ಕರಿಸುತ್ತಾ
ನವ ಸಂವತ್ಸರ ಸವಿಯೋಣ
Happy ugadi - mAgA

Wednesday, January 14, 2015

ಹುಚ್ಚ ಹೊಸ ಸಂಕ್ರಾಂತಿ

ಮಕರ ಸಂಕ್ರಾಂತಿ
ಅಂದರೆ ವಾಟ್ಸುಪ ಅಲ್ಲಿ
ಬಂದ ಮೆಸ್ಸೇಜನ್ನು
ಥಟ್ ಅಂತ ಮುಂದೆ ಕಳ್ಸೋದ್?...

ಅದರೆ ಜೀವನದಲ್ಲಿ ನಿಜ್ವಾಗಿ
ಮಕರ ಸಂಕ್ರಾಂತಿ
ಕೊಟ್ಟ ಎಳ್ಬೆಲ್ಲವ ಬಾಯಗೆ
ಹಾಕ್ನಾಲ್ಕ ಸಿಹಿಮಾತಾಡೋದ

ಎಳ್ಬೆಲ್ಲವ ತಿಂದು
ಎಲ್ಬಿಲ್ಲದ ನಾಲಿಗೆಗೆ
ಸಿಹಿಯಾಗಿ ಮಾತಡ
ಎಂದು ಕೋರುವ ಸಂಕ್ರಾಂತಿ

ನಾಲ್ಗೆ ನುಡಿದ್ರೆ ಸಾಲ್ದ
ಮನಸ್ಸು ಸ್ವಚ್ಚ ಆಗ್ಬೇಕ
ಹಳೇಯ ಹೊಲ್ಸೆಲ್ಲ ಮರೀಬೇಕ
ಹೊಸ ಜೀವನ ಮಾಡ್ಬೇಕ

ಕೆಟ್ಟದ್ದೆಲ್ಲ ಮೆಟ್ನಿಲ್ಬೇಕ್
ಸ್ನೇಹ ದೊಡ್ಡದು ಅನ್ಬೇಕ
ದುಶ್ಮನಿ ಬಿಡ್ಬೇಕ ಸ್ನೇಹ ಮೆರೀಬೇಕ
ಎಳ್ಬೆಲ್ಲದಂಗೆ ಜೀವ್ನ ಅಂತಾ-
ತೋರ್ಸ್ಬೇಕ್ - ಮಗ(ಮಠ್ದ ಗಂಗಣ್ಣ)

Monday, January 5, 2015

ಸಿಂಧು

ಮಾ
ಅಪ್ಪಯ್ಯ ಎಂಗೆ ಬೇಕು
ಬುಲ್ಲೆಟ್ಟು ಬೈಕು

ಕಾಲೇಜಿಗೆ ಹೋಗಿ
ಆನು ಪ್ಯಾಟೆ ಸುತ್ತವು


ಬುಲ್ಲೆಟ್ಟು ಬೈಕು ಗೈಕು
ಯಾಕಾ ನಿಂಗೆ

ಪಲ್ಸರ ಹೋಂಡಾ
ನಡೀತಿಲ್ಯಾ

ತೆಪ್ಪಗೆ ಕಾಲೇಜಿಗೆ ಹೋಗಿ
ಬಪ್ಪಲಾಗ್ದ?

ಮಾ
ಅಪ್ಪಯ್ಯ ಶಿರಸಿ ಪ್ಯಾಟೆ
ಭಾಳ ಮುಂದುವರೆಜ್ಜು

ಬುಲೆಟ್ಟು ಹಯಾಬುಸಾ
ನಿಂಜಾ ಇವೇ ಆಗವು

ಪಲ್ಸರ್ ಗೆ ಹವಾ ಇಲ್ಲೆ
ಹೊಂಡಾ ಯಾರು ನೋಡ್ತ್ವಿಲ್ಲೆ

ಬುಲೆಟ್ಟ ಇದ್ರೆ ಎಲ್ಲಾ ತಿರಿಗಿ
ನೋಡ್ತಾ, ಯಾರಾದ್ರು ಕಣ್ಣು ಹೊಡಿತಾ


ಗೊತ್ತಾತಾ ಮಾಣಿ ಎಂಗೆ
ನಿನ್ನ ಕಷ್ಟ

ಅರ್ಥ ಆತಾ ಎಂಗೆ ನಿನ್ನ
ಎದೆ ಮಿಡಿತಾ

ಚಿಂತೆ ಏನು ಮಾಡಲಿಲ್ಲೆ
ದುಡ್ಡಿನ ಬಗ್ಗೆ ಹೆದರಲಿಲ್ಲೇ

ಚನ್ನಪಟ್ಟಣ ಬಜಾರಲ್ಲಿ
ಪದ್ಮಶ್ರೀ ಸಿನೆಮಾ ಬುಡದಲ್ಲಿ

ಜಯರಾಮ ಹೆಗಡೇರ ಮಗಳು
ಸಿಂಧು ಹೇಳಿ ಇದ್ದ

ಕೇಡೀಸೀಸಿ ಬ್ಯಾಂಕ ಅಲ್ಲಿ
ಸಾಲದ ಆಫೀಸರ್ ಆಗಿದ್ದು

ಆಂ ಹೇಳಿದೆ ಹೇಳ
ಬೈಕ್ ಸಾಲ ತಗಳ

ಮಾ
ಅಪ್ಪಯ್ಯ ಎಲ್ಲಾ ತಿಳಿತ
ನಿನ್ನ ಆಸೆ ನಂಗೆ ಗೊತ್ತಾತ

ನಿನ್ನ ಸೊಸೆನ ಬಿಟ್ಟು ಬರ್ತನಿಲ್ಲೆ
ಹಿಂದಿನ ಸೀಟು ಖಾಲಿ ಇಡ್ತ್ನಿಲ್ಲೆ - ಮಗ

Friday, January 2, 2015

ಹ್ಯಾಪಿ ನಿವ್ ಇಯರ್ ೨೦೧೫

ಡದಿನಗಳು ಉರುಳಿ
ಹೊಸ ದಿನಗಳು ಹೊರಳಿ
ಬಂದಿತಿದೋ ಹೊಸ ವರುಷ

ಯಾರೂ ಬೇಡ ಎನರು
ಯಾರೂ ಬೇಸರ ಪಡರು
ಹೃದಯ ತೆರೆದು ಬಾಚಿ ತಬ್ಬಿಕೊಳ್ಳುತ್ತಿಹರು

ಅಲ್ಲಿ ಇಲ್ಲಿ ಹೀಗೆ ಒಂದು ಅಪಸ್ವರ
ಹಿಂದೂ ಇಂಗ್ಲೀಷ  ಹಬ್ಬ ಎಂಬ ತತ್ಸಾರ
ಆದರೇನು ಎಲ್ಲರಲ್ಲೂ ಅತ್ಯುತ್ಸಾಹ

ವೇಳೆ ಬದಲು ಆಗಲಿ
ಹೊಸ ಸಮಯ ಕೂಡಿ ಬರಲಿ
ಸುಗಮ ದಾರಿಯಾಗಲಿ

ಹೊಸ ವರುಷ ಹರುಷ ತರಲಿ
ಎಲ್ಲರ ಕನಸು ನನಸಾಗಲಿ
ನೈಯಿಕತೆಯಿಂದ ಬದುಕು ಬಂಗಾರವಾಗಲಿ