ಹೊಸ ವರುಷ
ಹೊಸ ವರುಷದ ಹೊಸ ಗೆಳತಿಯೇ ,
ಹೇಗಿರುವೆ ನೀನು,
ನಿನ್ನ ಪರಿಚಯ ವಿತ್ತಾರೆ
ಎನಗೆ ಅದುವೇ , ಸವಿ ಜೇನು .........
ಹೊಸ ವರುಷ ಶುರುವಾಗಿದೆ ನೋಡು,
ಹೇಗಿರುವೆ ನೀನು,
ನಿನ್ನ ಪರಿಚಯ ವಿತ್ತಾರೆ
ಎನಗೆ ಅದುವೇ , ಸವಿ ಜೇನು .........
ಹೊಸ ವರುಷ ಶುರುವಾಗಿದೆ ನೋಡು,
ಈ ಛಳಿಯಲುೂ ಪಿಸು ಮಾತಾಡಿಸುತ್ತಿದೆ,
ಸಂಭ್ರಮಿಸಲು ಇದುವೇ ಶೃಂಗಾರ ಕಾವ್ಯ
ಏನಡಗಿದೆಯೊ ಈ ವರುಷದಲ್ಲಿ ಬಲ್ಲೆಯೇನು ನೀನು!
ಕೊರೆವ ಛಳಿಯನ್ನುೂ ಕೊರೆದು
ದೀಪಾವಳಿಯ ಅಲಂಕಾರದಿ ಮೆರೆದು,
ಪ್ರತ್ಯಕ್ಷ ವಾಗಿಹುದು ನೋಡು
ಈ ವರುಷ! !
ಅಚ್ಚರಿಗಳ ಆಗರ
ಬಯಸುವೆ ನೆಮ್ಮದಿಯ ಸಾಗರ,
ಗುಟ್ಟು ಬಿಡದ ಈ ಇರುವು
ತರಲೆಮೆಗೆ ಹರುಷಗಳ ಹೊಸ ತಿರುವು!
ಇಂದಿನ ಈ ದಿನ
ಆಗಲಿ ಸುವರ್ಣ ಕ್ಷಣ
ಬಂದರೆ ಬರಲಿ ಕಷ್ಟಗಳು
ಕೊಚ್ಚಿ ಹೋಗಲಿ ಅವು, ಹರುಷದ ಹೊಳೆಯಲ್ಲಿ
ನಿನ್ನ ಮನದಾಳ ಬಲ್ಲವರು ಯಾರಾ?
ನೀ ಇಟ್ಟ ಹೆಜ್ಜೆಯ ಗುರುತು ತೋರುವುದು ಎಮಗೆ,
ನೀ ಇಟ್ಟ ಹೆಜ್ಜೆಯ ಗುರುತು ತೋರುವುದು ಎಮಗೆ,
ಅಚ್ಚರಿಯ ಕಾದಿಟ್ಟು, ಕಾಡುವೆ ನೀನು,
ಏ ರೂಪಸಿ ಮಂದಹಾಸವ ಬೀರು... mAgA
Achcharigala Aagara,
Bayasuve Nemmadiya Saagara,
Guttu Bidada, ee iruvu,
Taralemage harushagala Hosa Tiruvu.
Indina ee Dina,
Aaagali Suvarna Kshana,
Bandare Barali Kashtagalu
Kochchi Hogali, Avu Harushada Holeyalli,
Ninna Manadaala, Ballavaru Yaara,
Nee Itta Hejjeya Gurutu Toruvudu Emage,
Achhariya Kaadittu, kaaduve Neenu,
ae roopasi, Mandahaasava ಬೀರು
- mAgA
No comments:
Post a Comment