Search This Blog

Monday, April 7, 2008

ಶ್ರೀ ಸರ್ವಧಾರಿ ಯುಗಾದಿ 4/7/8

ಹಸಿರು ತುಂಬುವೇ ನೀ
ಸಿರಿಯ ತರುವೆ ನೀ
ಕಂಪ ಬೀರುವೆ ನೀ
ಸಿಹಿಯ ನೀಡುವೆ ನೀ

ಛಳಿಗೆ ಹಾಡುವೆ ನೀ ಇತಿಶ್ರೀ
ಮುದ ನೀಡುವೆ ಮನಕೆ ನೀ
ಸೌಂದರ್ಯದ ರಾಶಿ ನೀ
ಸಿಂಗರಿಸುವೆ ನೀ ಸಡಗರದಿ

ವಸಂತ ತಂದಿರುವೆ ನಿನ್ನೋಂದಿಗೆ
ಜೀವನಕ್ಕೆ ಹೊಸ ಚೈತ್ರ ತಂದಿರರುವೆ
ನಿನ್ನೀ ಆಗಮನ ನೀಡಿಹುದು ಹೊಸ ಸಂಚಲನ
ಜೀವವ ತಂದಿರುವೆ ನೀ ಮಾಯೆಯಂತೆ

ಸರ್ವ ಆಧಾರಿ ಯಾಗಿ ಬಂದಿರುವೆ ನೀನು
ನೀನ್ನೇ ನಂಬಿರುವೆ ಬಲುಬಾಗಿ ನಾನು
ನಿನ್ನಲ್ಲಿ ಹುದುಗಿಹುದು ನನ್ನ ಆಸೆಗಳ ಮಾಲೆ
ನನಸಾಗುವಂತೆ ಹಾರೈಸು ಈ ಕನಸುಗಳ

ಸರ್ವಧಾರಿ ಸಂವತ್ಸರದ ಈ ಯುಗಾದಿಯೇ
ನೀನೇ ಆಧಾರಿ ಸರ್ವರಿಗೂ
ಸರ್ವಜಿತುವಿನ ನಂತರದಿ ಬಂದಿರುವಿ
ಸುಭಿಕ್ಷೆಯ ಹೊಳೆಯ ನೀ ಹರಿಸು

Hasiru Tumbuve Nee
Siriya taruve nee
kampa beeruve nee
sihiya needuve nee

chalige haaduve nee itishree
muda needuve manake nee
Soundaryada raashi nee
Singarisuve nee sadagaradi

vasanta tandiruve ninnondige
jeevanakke hosa chaitra tandiruve,
ninnee aagamana, needihudu hosa sanchalana,
jeevava tandiruve, nee maayeyante,

Sarvadhaare yaagi bandiruve neenu,
Ninna Nambiruve baluvaagi naanu,
ninnalli hudugihudu, nanna Aasegala maale,
nanasaaguvante maade ee kanasugala

Sarvadaari savantsarada ee ugaadiye,
Sarvarigu neene aadhari,
Sarvajituvina nantaradi bandiruve,
Subhiksheya holeya nee harise.

- mAgA

No comments: